
ಕೊಪ್ಪಳ/ಕುಕನೂರು: ಸಮೀಪದ ಗುದ್ನೇಪ್ಪನಮಠ ಗ್ರಾಮದಲ್ಲಿ ಕುಕನೂರು ತಾಲ್ಲೂಕು ಮಿನಿ ವಿಧಾನಸೌಧ ಕಟ್ಟಡ, ತಾಲ್ಲೂಕು ನ್ಯಾಯಾಲಯ ಕಟ್ಟಡ, ಬುದ್ಧ ಬಸವ ಅಂಬೇಡ್ಕರ್ ಭವನ ಕಟ್ಟಡ ನಿರ್ಮಾಣ ಮಾಡಲು ತಾಲ್ಲೂಕು, ಜಿಲ್ಲಾ ಆಡಳಿತ ಗುದ್ನೇಪ್ಪನಮಠ ಗ್ರಾಮಸ್ಥರ ವಿರೋಧದ ನಡುವೆ ಸಿದ್ದತೆ ನಡೆಸುತ್ತಿದೆ. ಗುದ್ನೇಪ್ಪನಮಠ ಗ್ರಾಮದಿಂದ ಕುಕನೂರು 3 ಕಿಲೋಮೀಟರ್ ದೂರವಿದೆ. 3-4 ಕಿ.ಮೀ ದೂರವಿರುವ ಪುಕ್ಸಟ್ಟೆ ಜಾಗದಲ್ಲಿ ಅದರಲ್ಲೂ 188 ಎಕರೆ ಗುದ್ನೇಶ್ವರ ಸೇವಾದಾರರು ಮತ್ತು ಅರ್ಚಕರಿಗೆ ಮೀಸಲಿಟ್ಟಿರುವ ಜಾಗದಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಸರ್ಕಾರಿ ಕಟ್ಟಡ ನಿರ್ಮಾಣ ಮಾಡದಂತೆ ಧಾರವಾಡ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ಗ್ರಾಮಸ್ಥರು ತಂದಿದ್ದಾರೆ. ಆದರೂ ಬಂದ್ ನೆಪ ಮಾಡಿಕೊಂಡು 3-4 ಕಿಲೋ ಮೀಟರ್ ದೂರದಲ್ಲಿರುವ ಪುಕ್ಸಟ್ಟೆ ಜಾಗದಲ್ಲಿ ಅದರಲ್ಲೂ ಸೇವಾದಾರರು ಮತ್ತು ಅರ್ಚಕರಿಗೆ ಮೀಸಲಾಗಿರುವ ಜಾಗದಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣ ಮಾಡಲು ಹೊರಟಿದ್ದಾರೆ. ಗುದ್ನೇಪ್ಪನಮಠ ಗ್ರಾಮಸ್ಥರ ಇದರ ಬಗ್ಗೆ ಹೋರಾಟ ಮಾಡಲು ಹೋದರೆ ಪ್ರಮುಖ ಮುಖಂಡರಿಗೆ ಒಂದು ರೀತಿಯಲ್ಲಿ ಹತ್ತಿಕ್ಕುವ ಪ್ರಯತ್ನದ ಕೆಲಸವಾಗುತ್ತಿದೆ. ಗುದ್ನೇಪ್ಪನಮಠ ಗ್ರಾಮ ಕೇವಲ ಜಂಗಮರು ಇರುವಂತಹ ಸಣ್ಣ ಗ್ರಾಮ. 1200 ಹೆಚ್ಚು ಜಂಗಮರಿದ್ದಾರೆ. 3-4 ಕಿ.ಮೀ ದೂರ ಸರ್ಕಾರಿ ಕಟ್ಟಡ ನಿರ್ಮಾಣ ಮಾಡುವ ಬದಲು ಕುಕನೂರು ಸಮೀಪದಲ್ಲಿ ಜಾಗ ಖರೀದಿಸಿ, ಸರ್ಕಾರಿ ಕಟ್ಟಡಗಳನ್ನು ಕಟ್ಟಿಕೊಳ್ಳಲಿ, ಪುಕ್ಸಟ್ಟೆ ಜಾಗಕ್ಕೇ ಅಥವಾ ಸೇವಾದಾರರು ಮತ್ತು ಅರ್ಚಕರಿಗೆ ಮೀಸಲಾಗಿರುವ ಜಾಗಕ್ಕೆ ಕೈ ಹಾಕುವುದಲ್ಲ. ಗ್ರಾಮಸ್ಥರ ಬೇಡ ಅಂದಮೇಲೆ ತಾಲ್ಲೂಕು ಜಿಲ್ಲಾಡಳಿತ ಕೈ ಹಾಕುವುದು ಏಕೆ?. ಯಾರು ಒತ್ತಡಕ್ಕೆ?. ಗುದ್ನೇಪ್ಪನಮಠ ಗ್ರಾಮದ ಗುದ್ನೇಶ್ವರ ದೇವಸ್ಥಾನ ಮಾತ್ರ ಮುಜರಾಯಿ ಇಲಾಖೆಗೆ ಸೇರಿದೆ. ಸರ್ವೇ ನಂ 78 ಆಸ್ತಿ ಮುಜರಾಯಿ ಇಲಾಖೆಗೆ ಸೇರಿಲ್ಲ. ಈ ಆಸ್ತಿಯು ಗುದ್ನೇಶ್ವರ ಸೇವಾದಾರರು ಮತ್ತು ಅರ್ಚಕರ ಆಸ್ತಿಯಾಗಿದೆ. ಈ ಆಸ್ತಿ ಮೇಲೆ ಯಾರು ಕಣ್ಣು ಇದೆ. ಅದನ್ನು ಈ ಕೂಡಲೇ ಕೈ ಬಿಟ್ಟರೆ ಒಳ್ಳೆಯದು. ಕುಕನೂರ ಸಮೀಪ 100-200 ಮೀಟರ್ ರಲ್ಲಿ ಸರ್ಕಾರಿ ಕಚೇರಿಗಳನ್ನು ನಿರ್ಮಾಣ ಮಾಡಲಿ, ಇದರಲ್ಲಿ ಯಾರು ಅಭ್ಯಂತರವಿಲ್ಲ. ಗುದ್ನೇಪ್ಪನಮಠದ ಸರ್ವೇ ನಂ 78 ಆಸ್ತಿ ಮೇಲೆ ಸರ್ಕಾರಿ ಕಟ್ಟಡ ನಿರ್ಮಾಣ ಬೇಡ. ಇದು ಗುದ್ನೇಪ್ಪನಮಠ ಗ್ರಾಮಸ್ಥರ ಒಕ್ಕೂರಲ ಆಗ್ರಹವಾಗಿದೆ.