
ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಹುಬ್ಬಳ್ಳಿ ತಾಲ್ಲೂಕಿನ ಮಲ್ಲಿಗವಾಡ ಗ್ರಾಮದಲ್ಲಿ ಬಸ್ ನಿಲ್ದಾಣ ಇಲ್ಲದೇ, ಗ್ರಾಮಸ್ಥರು, ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಬಿಸಿಲು, ಮಳೆ, ಗಾಳಿ ಲೆಕ್ಕಿಸದೆ ಪರದಾಡುತ್ತಿದ್ದಾರೆ. ಹಾಗಾಗಿ CSR ಅನುದಾನ ಅಡಿಯಲ್ಲಿ ಮಲ್ಲಿಗವಾಡ ಗ್ರಾಮದ ನೀರಿನ ಟ್ಯಾಂಕಿನ ಹತ್ತಿರ ಬಸ್ ನಿಲ್ದಾಣದ ತಂಗುದಾಣ ನಿರ್ಮಾಣ ಮಾಡಬೇಕು. ಇದ್ದರಿಂದ ಮಲ್ಲಿಗವಾಡ ಗ್ರಾಮಸ್ಥರು, ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಆದ್ದರಿಂದ ಮಲ್ಲಿಗವಾಡ ಗ್ರಾಮದಲ್ಲಿ CSR ಅನುದಾನದಡಿ ಬಸ್ ನಿಲ್ದಾಣದ ತಂಗುದಾಣ ನಿರ್ಮಾಣ ಮಾಡಬೇಕು ಮತ್ತು ಹುಬ್ಬಳ್ಳಿ ತಾಲೂಕಿನ ಮಲ್ಲಿಗವಾಡ-ಮಜ್ಜಿಗುಡ್ಡ ಗ್ರಾಮೀಣ ರಸ್ತೆಯನ್ನು ಗ್ರಾಮ ಸಡಕ್ ಯೋಜನೆಯಡಿ ನಿರ್ಮಾಣ ಮಾಡಬೇಕು. ಏಕೆಂದರೆ 4-5 ದಶಕ ಕಾಲ ರಸ್ತೆ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಒತ್ತಡವನ್ನು ಹಾಕಿದರು ಕ್ಯಾರೇ ಎಂದಿಲ್ಲ ಮತ್ತು ಮಲ್ಲಿಗವಾಡ-ಮಜ್ಜಿಗುಡ್ಡ ರಸ್ತೆಯಲ್ಲಿ ದೊಡ್ಡದಾದ ಹಳ್ಳವಿದ್ದು, ಹಳ್ಳ ದಾಟಿದ ನಂತರ ಸದರಿ ರಸ್ತೆ ಇರುವುದಿಲ್ಲ. ಇದ್ದರಿಂದ ಅಣ್ಣಿಗೇರಿ, ನವಲಗುಂದ ಪಟ್ಟಣಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ರೈತರ ವ್ಯವಸಾಯ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗ್ರಾಮ ಸಡಕ್ ಯೋಜನೆಯಡಿ ಹುಬ್ಬಳ್ಳಿ ತಾಲೂಕಿನ ಮಲ್ಲಿಗವಾಡ ಮಜ್ಜಿಗುಡ್ಡ ಗ್ರಾಮೀಣ ರಸ್ತೆಯನ್ನು ಅಭಿವೃದ್ಧಿಪಡಿಸಿದರೇ, ಮಲ್ಲಿಗವಾಡ ಗ್ರಾಮಸ್ಥರಿಗೆ, ರೈತರಿಗೆ ಅನುಕೂಲವಾಗಲಿದೆ. ಆದ್ದರಿಂದ ಗ್ರಾಮ ಸಡಕ್ ಯೋಜನೆಯಡಿ ಸದರಿ ರಸ್ತೆ ನಿರ್ಮಾಣ ಮಾಡಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಹಾಗೂ ಧಾರವಾಡ ಲೋಕಸಭಾ ಸಂಸದರು ಪ್ರಲ್ಹಾದ ಜೋಶಿ ಅವರ ಜನಸಂಪರ್ಕ ಕಚೇರಿಗೆ ವೀರೇಶ ಧೂಪದಮಠ ಮನವಿ ಸಲ್ಲಿಸಿದ್ದಾರೆ.