10 Jan 2026

ಗುದ್ನೇಶ್ವರ ಜಾತ್ರೆ ವಿಶೇಷ ಬಸ್

By


ಕೊಪ್ಪಳ/ಕುಕನೂರು: ಸಮಿಪದ ಗುದ್ನೇಪ್ಪನಮಠ ಗ್ರಾಮದಲ್ಲಿ 2025 ಡಿಸೆಂಬರ್ 03, 04, 05, 06 ರಂದು ಕುಕನೂರ ತಾಲೂಕಿನ ಗುದ್ದೇಶ್ವರಮಠದ ಗುದ್ದೇಶ್ವರ ಜಾತ್ರೆ ನಡೆಯಲಿದ್ದು, ಅಂದು ಕೊಪ್ಪಳ ಜಿಲ್ಲೆ ಸೇರಿದಂತೆ ಬೇರೆ ಬೇರೆ ಜಿಲ್ಲೆಯಿಂದ ಭಕ್ತರು ಜಾತ್ರೆಗೆ ಆಗಮಿಸಲಿದ್ದಾರೆ. ಆದ್ದರಿಂದ ಭಕ್ತರ ಅನುಕೂಲಕ್ಕಾಗಿ ಮತ್ತು ಭಕ್ತರ ಬೇಡಿಕೆ ತಕ್ಕಂತೆ ಪ್ರತಿ 15 ನಿಮಿಷಕ್ಕೆ ಒಂದರಂತೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಮತ್ತು ಗದಗ-ಕುಕನೂರು ಬಸ್, ಕೊಪ್ಪಳ-ಕುಕನೂರ ಬಸ್‌ಗಳನ್ನು ಗುದ್ದೇಶ್ವರಮಠ/ಗುದ್ನೇಪ್ಪನಮಠ ಗ್ರಾಮದವರೆಗೆ ವಿಸ್ತರಿಸಬೇಕು. ಹೋಗುವ ಮಾರ್ಗ ಕುಕನೂರು ಬಸ್ ನಿಲ್ದಾಣದಿಂದ ವಿದ್ಯಾಶ್ರೀ ಶಾಲೆ, ದ್ಯಾಂಪೂರ-ಗುದ್ದೇಶ್ವರಮಠ ರಸ್ತೆ ಮುಖಾಂತರ ಗುದ್ದೇಶ್ವರಮಠದ ಜಗದ್ಗುರು ರೇಣುಕಾಚಾರ್ಯ ಸರ್ಕಲ್‌ಗೆ ಬಸ್ ನಿಲುಗಡೆ ಮಾಡುವುದು. ತೆರಳು ಮಾರ್ಗ ಗುದ್ದೇಶ್ವರಮಠದ ಜಗದ್ಗುರು ರೇಣುಕಾಚಾರ್ಯ ಸರ್ಕಲ್‌ನಿಂದ ನೇರವಾಗಿ ಕುಕನೂರ-ಗುದ್ದೇಶ್ವರಮಠ ರಸ್ತೆ ಮುಖಾಂತರ ಕುಕನೂರ ಬಸ್ ನಿಲ್ದಾಣ ತಲುಪುವಂತೆ ವ್ಯವಸ್ಥೆ ಮಾಡಬೇಕು ಮತ್ತು ಗುದ್ದೇಶ್ವರಮಠದ ಜಗದ್ಗುರು ರೇಣುಕಾಚಾರ್ಯ ಸರ್ಕಲ್‌ಗೆ ಬಸ್ ನಿಲುಗಡೆ ಮಾಡಬೇಕು ಎಂದು ಕುಕನೂರ, ಗುದ್ದೇಶ್ವರಮಠದ ಗ್ರಾಮಸ್ಥರು ಭಕ್ತರ ಪರವಾಗಿ ಗ್ರಾಮಸ್ಥರು ಕುಕನೂರ ಘಟಕ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಡಿಸೆಂಬರ್ 4 ರಂದು ಜಾತ್ರೆ ನಡೆಯಲಿದೆ. ಬಸ್ ನಿಲುಗಡೆಗೆ ಗುದ್ನೇಶ್ವರಮಠದ ರೇಣುಕಾಚಾರ್ಯ ಸರ್ಕಲ್ ಬಳಿ ಕುಕನೂರು ಪಟ್ಟಣ ಪಂಚಾಯತ ವ್ಯವಸ್ಥೆ ಮಾಡಬೇಕು ಎಂದು ಪತ್ರಿಕೆ ಮೂಲಕ ವಿನಂತಿಸಿದ್ದಾರೆ.